ಕನ್ನಡ ಸಾಹಿತ್ಯದ ಹೆಮ್ಮೆಯ ಕವಿ ಮತ್ತು ಸಂತ, ಶಿಶುನಾಳ ಷರೀಫರು ತಮ್ಮ ತತ್ವಪದಗಳಿಂದ ಜನರ ಮನೆ ಮಾತಾಗಿದ್ದಾರೆ. ಕರ್ನಾಟಕ ಸರ್ಕಾರವು ಅವರ ಹೆಸರಿನಲ್ಲಿ 1995ರಿಂದ 'ಸಂತ ಶಿಶುನಾಳ ಷರೀಫ ಪ್ರಶಸ್ತಿ'ಯನ್ನು ನೀಡುತ್ತಾ ಬಂದಿದೆ. ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಕಲಾವಿದರು ಮಾಡಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಪ್ರಶಸ್ತಿಯು ಶಾಲು, ಫಲಕ, ಹಾರ ಮತ್ತು 5 ಲಕ್ಷ ರೂಪಾಯಿಗಳನ್ನು ಒಳಗೊಂಡಿರುತ್ತದೆ.
| ಕ್ರ. ಸಂ. | ಹೆಸರು | ವರ್ಷ |
|---|---|---|
| 1. | ಶ್ರೀಮತಿ ಜಯಂತಿದೇವಿ ಹಿರೇಬೆಟ್ | 1995 |
| 2. | ಶ್ರೀ ಸಿ. ಅಶ್ವಥ್ | 1996 |
| 3. | ಶ್ರೀಮತಿ ಹೆಚ್. ಆರ್. ಲೀಲಾವತಿ | 1997 |
| 4. | ಶ್ರೀಮತಿ ಅನುರಾಧಾ ಧಾರೇಶ್ವರ | 1998 |
| 5. | ಶ್ರೀ ಶಿವಮೊಗ್ಗ ಸುಬ್ಬಣ್ಣ | 1999 |
| 6. | ಶ್ರೀ ಎಚ್. ಕೆ. ನಾರಾಯಣ | 2000 |
| 7. | ಶ್ರೀ ಎಂ. ಪ್ರಭಾಕರ್ | 2001 |
| 8. | ಶ್ರೀ ಗರ್ತಿಕೆರೆ ರಾಘಣ್ಣ | 2002 |
| 9. | ಶ್ರೀಮತಿ ಶ್ಯಾಮಲಾ ಜಾಗೀರ್ದಾರ್ | 2003 |
| 10. | ಶ್ರೀ ಮುರುಗೋಡು ಕೃಷ್ಣದಾಸರು | 2004 |
| 11. | ಶ್ರೀ ಈಶ್ವರಪ್ಪ ಮಿಣಜಿ | 2005 |
| 12. | ಶ್ರೀಮತಿ ಸಿ. ಕೆ. ತಾರಾ | 2006 |
| 13. | ಶ್ರೀ ಕೇಶವ ಗುರಂ | 2007 |
| 14. | ಶ್ರೀ ಗುಡಿಬಂಡೆ ರಾಮಾಚಾರ್ | 2008 |
| 15. | ಶ್ರೀ ಟಿ. ವಿ. ರಾಜು, ತುಮಕೂರು | 2009 |
| 16. | ಶ್ರೀಮತಿ ಬಿ. ಕೆ. ಸುಮಿತ್ರ, ಬೆಂಗಳೂರು | 2010 |
| 17. | ಶ್ರೀ ನಾರಾಯಣರಾವ್ ಮಾನೆ | 2011 |
| 18. | ಶ್ರೀ ಎಸ್. ಸೋಮಸುಂದರಂ | 2012 |
| 19. | ಶ್ರೀಮತಿ ಎಸ್. ಕೆ. ವಸುಮತಿ | 2013 |
| 20. | ಶ್ರೀ ರಾಜಗುರು ಗುರುಸ್ವಾಮಿ ಕಲಿಕೇರಿ | 2014 |
| 21. | ಶ್ರೀಮತಿ ರತ್ನಮಾಲ ಪ್ರಕಾಶ್ | 2015 |
| 22. | ಶ್ರೀ ವೈ. ಕೆ. ಮುದ್ದುಕೃಷ್ಣ | 2016 |
| 23. | ಶ್ರೀ ಅಮೀನ್ ಸಾ ಶರೀಫ್ ವಠಾರ | 2017 |
| 24. | ಶ್ರೀ ಹುಸೇನ್ ಸಾಬ್ | 2018 |
| 25. | ಶ್ರೀ ಪಂಡಿತ ವಾದಿರಾಜ ನಿಂಬರಗಿ | 2019 |